ಚಿತ್ರ: ಕವಿರತ್ನ ಕಾಳಿದಾಸ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್

ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ

ಅಳ್‌ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್‌ಬ್ಯಾಡ್ ಕಣೆ ಸುಮ್ಕಿರೆ ಏಯ್..ಏಯ್...ಏಯ್..ಏಯ್
ವೀರನಂಥ ಶೂರನಂಥ ಮಾರನಂಥ ಗಂಡ ನಾನು
ಏಕೆ ಅಳ್ತಾ ನಿಂತುಕೊಂಡೆ ಅಳ್‍ಬುರ್‍ಕಿಯಂತೆ
ನನ್ನ ಮ್ಯಾಲೆ ನಿನಗೆ ಕೋಪಾ ಯಾಕೆ
ಕೇಳೆ ಇಲ್ಲೇ ನಿನ್ನ ಮುದ್ದಾಡ್‍ಬೇಕೆ

ನೆತ್ತಿ ಮೇಲೆ ಹೊತ್ತು ನಿನ್ನ
ಬೆಟ್ಟಾನಾದ್ರೂ ಹತ್ತುತೀನಿ
ಶಾಲೇನಾದ್ರೂ ಒಕ್ಕೊಡ್ತೀನಿ
ಸುಮ್ಕಿರು ಮತ್ತೆ
ನೀ ಸುಮ್ಕಿರು ಮತ್ತೆ
ಹೇ.. ಹೆಹೆಹೆ..ಹೇ..

ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್..ಏಯ್..ಏಯ್..ಏಯ್

ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ಹೌದು ಚಿನ್ನ
ಬೆಟ್ಟಾದ ಕೆಳಗೆ ಆಲದ ಮರವೊಂದೈತೇ

ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ನಾನು ನೀನು ಕೂಡಿಕೊಂಡು ಕುರಿಗಳ್ನಲ್ಲಿ ಮೇಯಿಸ್ಕೊಂಡು
ಬಿಸಿಲಾಗ್ ಅಲ್ದು ಹಿಟ್ಟು ಉಂಡು
ಒಂಗೆ ನೆರಳಲ್ ಕಂಬ್ಳಿ ಬೀಸಿ
ಜೋಡಿ ಕುರಿಗಳಂಗೆ ನಾವು ಮಲ್ಗಿಕೊಳ್ಳೋಣ
ಸೇರಿ ಗೊರ್‍ಕೆ ಹೊಡ್ಯೋಣ

ಗೊರ್ರ್...ಗೊರ್ರ್
ಹೇ.. ಹೆಹೆಹೆ.. ಹೇ..

ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್..ಏಯ್...ಏಯ್..ಏಯ್

ಮುಂಜಾನೆ ಸೂರ್ಯ ಅಂದ

ಅಕ್ಕಿಗಳ ಚಿಲಿಪಿಲಿ ಚಂದ
ಆಹ ಆಹ ಆಹ ಏನ್ ಹೇಳ್ಲಿ ಅದ್ರ ಅಂದಾವಾ?
ಮುಂಜಾನೆ ಸೂರ್ಯ ಅಂದ
ಅಕ್ಕಿಗಳ ಚಿಲಿಪಿಲಿ ಚಂದ
ಬೀಸೋ ಗಾಳಿ ತೂಗೋ ಮರವಾ
ಹರಿಯೋ ನದಿಯಾ ಕಾಣೋಣಾ

ಗುಡುಗೊ ಸಿಡಿಲೊ
ಚಳಿಯೊ ಮಳೆಯೊ
ದಿನವೂ ಅಲೆಯೋಣ ಬಾ..ಹ ಹ ಹ ಹ ಹಾ..

ಅಳ್‌ಬ್ಯಾಡ್ ಕಣೇ ಸುಮ್ಕಿರೇ ನನ್ನ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್ ಏಯ್ ಏಯ್ ಏಯ್..

ತಳಾಂಗು ತದಿಗಿಣತೋಂ ||೩||
ಅಯ್ಯಯ್ಯಪ್ಪಾ...

Category: ಕನ್ನಡ ಚಿತ್ರಸಾಹಿತ್ಯ
Category: ಕವಿರತ್ನ ಕಾಳಿದಾಸ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ